Monday, 16 March 2020

ಸೀಳು ತುಟಿಯ ಬಗ್ಗೆ ಕೇಳಿದ್ದೀರಾ?

ಸೀಳು ತುಟಿ 
ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ  ಎಂದು ಕರೆಯಬಹುದು.  ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮದೋಷ ಅಂತಲೇ ಕರೆಯುತ್ತಾರೆ . ಯಾಕಂದ್ರೆ ಇದು ಹುಟ್ಟುವಾಗಲೇ ಬರುವಂತಹ ಸಮಸ್ಯೆ. ಇದು ಹೆಚ್ಚಾಗಿ ಕೆಲವು ಆನುವಂಶಿಕ ಪರಿಸ್ಥಿತಿಗಳು(genetic condition) ಅಥವಾ ಯಾವುದಾದರು ಸಿಂಡ್ರೋಮ್‌ನಿಂದ ಉಂಟಾಗುತ್ತದೆ.

ಲಕ್ಷಣಗಳು 

  • ತುಟಿಯಲ್ಲಿನ ಒಡಕು - ತುಟಿ ಮೇಲಿನ ಒಸಡು ಮತ್ತು ಅಂಗುಳಿನ ಮೂಲಕ ತುಟಿಯನ್ನು ಮೂಗಿನ ಕೆಳಭಾಗಕ್ಕೆ ವಿಸ್ತರಿಸುತ್ತದೆ.
  • ಮುಖದ ಮೇಲೆ ಪರಿಣಾಮ ಬೀರುವ ಹಾಗೆ ಬಾಯಿಯ ಮೇಲಿನ ತುಟಿಯಲ್ಲಿ ಒಂದು ಬಿರುಕು ಕಾಣಿಸಿಕೊಳ್ಳುತ್ತದೆ. 
  • ಆಹಾರ ಸೇವನೆಯಲ್ಲಿ ಸಮಸ್ಯೆಗಳು. 
  • ಮೂಗಿನ ಮೂಲಕ ಮಾತನಾಡುತ್ತಾರೆ. 
  • ಕಿವಿ ಸೋಂಕು. 


ಕಾರಣಗಳು
ಸಾಮಾನ್ಯವಾಗಿ, ಗರ್ಭಧಾರಣೆಯ ಎರಡನೇ ಮತ್ತು ಮೂರನೇ ತಿಂಗಳುಗಳಲ್ಲಿ ತುಟಿ ಮತ್ತು ಅಂಗುಳನ್ನು ಬೆಸೆಯುವ ಅಂಗಾಂಶಗಳು ಸರಿಯಾಗಿ ಬೆಸೆಯದಿದ್ದಾಗ ಇವು ಸಂಭವಿಸುತ್ತವೆ.ಸೀಳು ತುಟಿ ಮತ್ತು ಸೀಳು ಅಂಗುಳವು ಆನುವಂಶಿಕ ಮತ್ತು ಸುತ್ತಲಿನ ವಾತಾವರಣದಿಂದ ಉಂಟಾಗುತ್ತದೆ.

ಅಪಾಯಕಾರಿ ಅಂಶಗಳು
ಸೀಳು ತುಟಿ ಮತ್ತು ಸೀಳು ಅಂಗುಳವು ವಿವಿಧ ಕಾರಣಗಳಿಂದ ಉಂಟಾಗಬಹುದು :

  • ಜೀನ್‌ಗಳು:  ಕುಟುಂಬದಲ್ಲಿ ಮೊದಲೇ ಯಾರಿಗಾದರೂ ಈ ಸೀಳು ತುಟಿ ಅಥವಾ ಅಂಗುಳಿನ ಸಮಸ್ಯೆ ಇದ್ದರೆ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. 
  • ಗರ್ಭಿಣಿಯಾಗಿದ್ದಾಗ ಕೆಲವು ಕೆಟ್ಟ ಹವ್ಯಾಸಗಳಿಂದ : ಗರ್ಭಾವಸ್ಥೆಯಲ್ಲಿ ಸಿಗರೇಟು ಸೇದುವುದು ಅಥವಾ ಮದ್ಯಪಾನ ಮಾಡುವುದರಿಂದ ಸೀಳು ತುಟಿ ಬೆಳೆಯಬಹುದು.
  • ಮಧುಮೇಹ(ಡಯಾಬಿಟಿಸ್): ಗರ್ಭಾವಸ್ಥೆಯಲ್ಲಿ ಮಹಿಳೆಗೆ ಮಧುಮೇಹ ಇರುವುದು ಪತ್ತೆಯಾದರೆ, ಸೀಳು ತುಟಿಯ ಸಮಸ್ಯೆ ಮಗುವಿನಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ.

ಶಸ್ತ್ರಚಿಕಿತ್ಸೆ(ಸರ್ಜರಿ)
ಸಮಸ್ಯೆಯ ತೀವ್ರತೆಯನ್ನು ಆಧರಿಸಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಸರ್ಜರಿಗೆ ಕ್ರಮಗಳಿದ್ದು,ಇದನ್ನು ಮಗುವಿನ ವಯಸ್ಸಿಗೆ ಅನುಗುಣವಾಗಿ ಮಾಡಲಾಗುತ್ತದೆ-

  • ಸೀಳು ತುಟಿಯನ್ನು ಸರಿಪಡಿಸಲು - 3 ರಿಂದ 6 ತಿಂಗಳ ವಯಸ್ಸಿನವರೆಗೆ ಮಾಡಬಹುದು. 
  • ಸೀಳು ಅಂಗುಳನ್ನು ಸರಿಪಡಿಸಲು - 12 ತಿಂಗಳ ವಯಸ್ಸಿನವರೆಗೆ ಮಾಡಬಹುದು. 
  • ನಂತರದ ಶಸ್ತ್ರಚಿಕಿತ್ಸೆಗಳು -  2 ವರ್ಷ ಮತ್ತು ಹದಿಹರೆಯದ ವರ್ಷಗಳ(ಟೀನ್ ಏಜ್ ) ನಡುವೆ ಮಾಡಬಹುದು. 


ಕಾರ್ಯವಿಧಾನಗಳು (procedures):

ಸೀಳು ತುಟಿ ಸರಿಪಡಿಸಲು: ತುಟಿಗಳನ್ನು ಮುಚ್ಚಲು, ಸರ್ಜನ್ (ಡಾಕ್ಟರ್) ಸೀಳುಗಳ ಎರಡೂ ಬದಿಗಳಲ್ಲಿ ಕತ್ತರಿಸುತ್ತಾರೆ ಮತ್ತು ಅಂಗಾಂಶದ ಫ್ಲಾಪ್ ಮಾಡುತ್ತಾರೆ. ನಂತರ ಫ್ಲಾಪ್ಗಳನ್ನು ತುಟಿ ಸ್ನಾಯುಗಳಿಂದ ಹೊಲಿಯಲಾಗುತ್ತದೆ. ಸರಿಪಡಿಸಿದ ನಂತರ, ತುಟಿಯ ನೋಟವು ಸಾಮಾನ್ಯವಾಗುತ್ತದೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂಗನ್ನು ಸರಿಪಡಿಸುವ ಅಗತ್ಯವಿದ್ದರೆ, ಅದೇ ಸಮಯದಲ್ಲಿ ಸರಿ ಮಾಡಲಾಗುತ್ತದೆ.
ಸೀಳು ಅಂಗುಳನ್ನು ಸರಿಪಡಿಸಲು: ಮಗುವಿನ ಸ್ಥಿತಿಗೆ ಅನುಗುಣವಾಗಿ ಬಾಯಿಯ ಮೇಲಿನ ಭಾಗವನ್ನು ಬೇರ್ಪಡಿಸಲು ಮತ್ತು ಪುನರ್ ನಿರ್ಮಿಸಲು ಹಲವಾರು ಕಾರ್ಯವಿಧಾನಗಳಿವೆ. ಸರ್ಜನ್ ಸೀಳಿನ ಎರಡೂ ಬದಿಯಲ್ಲಿ ಕಟ್ ಮಾಡುತ್ತಾರೆ , ಅಂಗಾಂಶಗಳು ಮತ್ತು ಸ್ನಾಯುಗಳನ್ನು ಮರು-ಸ್ಥಾನದಲ್ಲಿರಿಸಿ ನಂತರ ಅದನ್ನು ಹೊಲಿಯಲಾಗುತ್ತದೆ.
ಕಿವಿ ಕೊಳವೆ(Ear tube) ಶಸ್ತ್ರಚಿಕಿತ್ಸೆ: ಸೀಳು ತುಟಿಯಿಂದ ಬಳಲುತ್ತಿರುವ ಮಕ್ಕಳಿಗೆ,ಶ್ರವಣ ದೋಷವಿರುತ್ತದೆ ಇದನ್ನು ತಪ್ಪಿಸಲು ಕಿವಿ ಕೊಳವೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಖರ್ಚು
ನಿಮಗೆ ಸೀಳು ತುಟಿಯ ಸರ್ಜರಿ ಬೇಕಾಗಿದ್ರೆ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯರೊಂದಿಗೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಜರಿ ಎಕ್ಸ್ ಚೇಂಜ್  ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ  www.surgeryxchange.com ಗೆ ಲಾಗಿನ್ ಮಾಡಿ ಅಥವಾ 7676045678 ಗೆ ಕಾಲ್ ಮಾಡಿ.



Wednesday, 11 March 2020

5 reasons to say robotic prostate surgery is better compared to traditional surgery

Robotic surgery has been rapidly adopted by hospitals all over the world for use in the treatment of a wide range of conditions. In traditional open surgery, a surgeon operates by cut opening the skin, which is now replaced by robotically assisted laparoscopy, with a surgeon operating a robotic system that performs the surgery through smaller and fewer incisions.
In Robotic prostate surgery, the surgeon will sit with a controlling panel in an operation room from where he controls four robotic arms which has full 360 – degree rotation capabilities. A keyhole sized incision is made to insert a video camera that provides a magnified, 3 – D image of a site. This detailed view helps the surgeon to see the nerve bundles and muscles surrounding the prostate.

Robotic prostate surgery offers quite a few benefits when compared to open type.

  1. Less pain
  2. Less blood loss
  3. Fewer incision and no open cuts
  4. Precise work
  5. Quick recovery
Contact SurgeryXchange for any information related to robotic prostate surgery.

Monday, 2 March 2020

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಆಹಾರ ಪದಾರ್ಥಗಳು

 ಬೇಸಿಗೆಕಾಲದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ನೀರಿನಂಶ ಸಿಗದೇಯಿದ್ದರೇ ನಿರ್ಜಲೀಕರಣ ಅಥವಾ ಡೀಹೈಡ್ರೇಷನ್ ಸಮಸ್ಯೆ ಪ್ರಾರಂಭವಾಗುತ್ತದೆ. ನಿಶ್ಶಕ್ತಿಯು ಕೂಡ ಡೀಹೈಡ್ರೇಶನ್ ಸಮಸ್ಯೆಯ ಒಂದು ಲಕ್ಷಣ. ಇದನ್ನು ಕಡೆಗಣಿಸಿದರೆ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ನಾವು ಸೇವಿಸುವ ಆಹಾರಗಳಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು.
 ಹಾಗಾದರೆ ಬನ್ನಿ ನಾವು ನಿಮಗೆ ಈ ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಆಹಾರಗಳನ್ನೂ ತಿಳಿಸಿಕೊಡುತ್ತೇವೆ.
1.ಕಲ್ಲಂಗಡಿ
 ಕಲ್ಲಂಗಡಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಸಿಗುವಂತಹ ಹಣ್ಣು. ಇದು 91.45%ನಷ್ಟು ನೀರನ್ನು ಹೊಂದಿರುತ್ತದೆ. ಇದು ನಿಮ್ಮ ದೇಹದ ನೀರಿನ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ. ಅಲ್ಲದೆ, Anti-Oxidant ಗುಣಲಕ್ಷಣಗಳಿಂದ ತುಂಬಿರುವ ಕಲ್ಲಂಗಡಿ ನಿಮಗೆ ಅದ್ಭುತ ಕೂಲಿಂಗ್ ಎಫೆಕ್ಟ್ ನೀಡುತ್ತದೆ.
2.ಸೌತೆಕಾಯಿ 
ಸೌತೆಕಾಯಿಯು ಅಧಿಕವಾಗಿ ಫೈಬರ್ ಅಂಶದಿಂದ ತುಂಬಿದ್ದು, ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವೂ ಇದೆ. ಆದ್ದರಿಂದ, ಬಿಸಿ ವಾತಾವರಣದಲ್ಲಿ ತಂಪಾಗಿರಲು ಈ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.
3.ಮೊಸರು
ಮೊಸರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಬೆಸ್ಟ್ ಫುಡ್. ಅಲ್ಲದೆ ಜೀರ್ಣಕ್ರಿಯೆಗೆ ಮೊಸರು ಸೇವಿಸುವುದರಿಂದ ಸಾಕಷ್ಟು ಉಪಯೋಗವಿದೆ.ನೀವು ಮೊಸರನ್ನು ವಿವಿಧ ರೀತಿಯಲ್ಲಿ ತಯಾರಿಸಿ ಸೇವಿಸಬಹುದು . ಉದಾಹರಣೆಗೆ ಸ್ವೀಟ್ ಲಸ್ಸಿ,ಮಸಾಲ ಮಜ್ಜಿಗೆ,ರಾಯತ ಮತ್ತು ಇವುಗಳ ಜತೆಗೆ ಊಟದಲ್ಲಿ ಮೊಸರು ಬಳಸುವುದು ಹೆಚ್ಚು ಸೂಕ್ತ.
4.ಎಳನೀರು 
ಬೇಸಿಗೆ ಕಾಲದಲ್ಲಿ ಎಳನೀರು ಬೆಸ್ಟ್ ಡ್ರಿಂಕ್. ಇದು ಸುಲಭವಾಗಿ ಸಿಗುತ್ತದೆ ಮತ್ತು ಇದರಲ್ಲಿ ನಮ್ಮ ದೇಹಕ್ಕೆ ಅವಶ್ಯಕವಾದ ವಿಟಮಿನ್ಸ್,ಮಿನರಲ್ಸ್ ಮತ್ತು ಹಲವು ಪೋಷಕಾಂಶಗಳಿಂದ ಕೂಡಿದೆ. ಸಂಶೋಧನೆಯ ಪ್ರಕಾರ ಎಳನೀರನ್ನು ಪ್ರತಿದಿನ ಕುಡಿಯುವುದರಿಂದ ಕ್ಯಾನ್ಸರ್ ಖಾಯಿಲೆಯಿಂದ ದೂರವಿರಬಹುದು.
5.ಹಸಿರು ಸೊಪ್ಪು ತರಕಾರಿಗಳು
 ಹಸಿರು ಸೊಪ್ಪು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿದೆ. ನೆನಪಿಡಿ, ಈ ತರಕಾರಿಗಳನ್ನು ಅತಿಯಾಗಿ ಬೇಯಿಸಬಾರದು  ಏಕೆಂದರೆ ಅವುಗಳಲ್ಲಿ ನೀರಿನ ಅಂಶ ಹೊರಟು ಹೋಗುತ್ತದೆ.
6.ಕರ್ಬೂಜ
ಕರ್ಬೂಜ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವಿರುವುದರಿಂದ ದೇಹವನ್ನು ಹೈಡ್ರೇಟ್ ಮಾಡುವುದಲ್ಲದೆ  ರಿಫ್ರೆಶ್ ಎಫೆಕ್ಟ್ಅನ್ನು  ಕೊಡುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಕರ್ಬೂಜ ಹಣ್ಣು ತಿನ್ನುವುದು ಒಳ್ಳೆಯದು.
7.ನಿಂಬೆ ರಸ 
ಇದು ಕೂಡ ಬೇಸಿಗೆಯಲ್ಲಿ ಕುಡಿಯುವುದರಿಂದ ದೇಹವನ್ನು ತಂಪಾಗಿಸಿ ರಿಫ್ರೆಶಿಂಗ್ ಎಫೆಕ್ಟ್ಅನ್ನು ಕೊಡುತ್ತದೆ.
8.ಕಬ್ಬಿನ ರಸ
ಕಬ್ಬಿನ ರಸ ಬೇಸಿಗೆಯಲ್ಲಿ ಅತ್ಯಗತ್ಯ. ಇದು ವಿಟಮಿನ್ಸ್ ಇಂದ ಕೂಡಿರುತ್ತದೆ ಮತ್ತು ದೇಹದ ಶಾಖವನ್ನು ಕಡಿಮೆ ಮಾಡುತ್ತದೆ.
ನೀವು ಫುಡ್ ಡಯಟ್ ಅಥವಾ ಬೇರೆ ಯಾವುದೇ ಮೆಡಿಕಲ್ ಕನ್ಸಲ್ಟೇಶನ್ ಮತ್ತು ಸರ್ಜರಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, www.surgeryxchange.com ಗೆ ಲಾಗಿನ್ ಆಗಿ.

ಸೀಳು ತುಟಿಯ ಬಗ್ಗೆ ಕೇಳಿದ್ದೀರಾ?

ಸೀಳು ತುಟಿ  ಮೇಲಿನ ತುಟಿಯ ಭಾಗದಲ್ಲಿ ಸೀಳಿಕೊಂಡಿದ್ದರೆ ಅದನ್ನು ಸೀಳು ತುಟಿ ಮತ್ತು ಸೀಳು ಅಂಗುಳ  ಎಂದು ಕರೆಯಬಹುದು.  ಮುಖದ ರಚನೆಯು ಸರಿಯಾಗಿ ಬೆಳವಣಿಗೆಯಾಗದಿದ್ದರೆ ...