ಬೇಸಿಗೆಕಾಲದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ನೀರಿನಂಶ ಸಿಗದೇಯಿದ್ದರೇ ನಿರ್ಜಲೀಕರಣ ಅಥವಾ ಡೀಹೈಡ್ರೇಷನ್ ಸಮಸ್ಯೆ ಪ್ರಾರಂಭವಾಗುತ್ತದೆ. ನಿಶ್ಶಕ್ತಿಯು ಕೂಡ ಡೀಹೈಡ್ರೇಶನ್ ಸಮಸ್ಯೆಯ ಒಂದು ಲಕ್ಷಣ. ಇದನ್ನು ಕಡೆಗಣಿಸಿದರೆ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ನಾವು ಸೇವಿಸುವ ಆಹಾರಗಳಲ್ಲಿ ಕೆಲವು ಬದಲಾವಣೆ ಮಾಡುವುದರಿಂದ ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು.
ಹಾಗಾದರೆ ಬನ್ನಿ ನಾವು ನಿಮಗೆ ಈ ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಆಹಾರಗಳನ್ನೂ ತಿಳಿಸಿಕೊಡುತ್ತೇವೆ.
1.ಕಲ್ಲಂಗಡಿ
ಕಲ್ಲಂಗಡಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಸಿಗುವಂತಹ ಹಣ್ಣು. ಇದು 91.45%ನಷ್ಟು ನೀರನ್ನು ಹೊಂದಿರುತ್ತದೆ. ಇದು ನಿಮ್ಮ ದೇಹದ ನೀರಿನ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ. ಅಲ್ಲದೆ, Anti-Oxidant ಗುಣಲಕ್ಷಣಗಳಿಂದ ತುಂಬಿರುವ ಕಲ್ಲಂಗಡಿ ನಿಮಗೆ ಅದ್ಭುತ ಕೂಲಿಂಗ್ ಎಫೆಕ್ಟ್ ನೀಡುತ್ತದೆ.
2.ಸೌತೆಕಾಯಿ
ಸೌತೆಕಾಯಿಯು ಅಧಿಕವಾಗಿ ಫೈಬರ್ ಅಂಶದಿಂದ ತುಂಬಿದ್ದು, ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವೂ ಇದೆ. ಆದ್ದರಿಂದ, ಬಿಸಿ ವಾತಾವರಣದಲ್ಲಿ ತಂಪಾಗಿರಲು ಈ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.
3.ಮೊಸರು
ಮೊಸರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಬೆಸ್ಟ್ ಫುಡ್. ಅಲ್ಲದೆ ಜೀರ್ಣಕ್ರಿಯೆಗೆ ಮೊಸರು ಸೇವಿಸುವುದರಿಂದ ಸಾಕಷ್ಟು ಉಪಯೋಗವಿದೆ.ನೀವು ಮೊಸರನ್ನು ವಿವಿಧ ರೀತಿಯಲ್ಲಿ ತಯಾರಿಸಿ ಸೇವಿಸಬಹುದು . ಉದಾಹರಣೆಗೆ ಸ್ವೀಟ್ ಲಸ್ಸಿ,ಮಸಾಲ ಮಜ್ಜಿಗೆ,ರಾಯತ ಮತ್ತು ಇವುಗಳ ಜತೆಗೆ ಊಟದಲ್ಲಿ ಮೊಸರು ಬಳಸುವುದು ಹೆಚ್ಚು ಸೂಕ್ತ.
4.ಎಳನೀರು
ಬೇಸಿಗೆ ಕಾಲದಲ್ಲಿ ಎಳನೀರು ಬೆಸ್ಟ್ ಡ್ರಿಂಕ್. ಇದು ಸುಲಭವಾಗಿ ಸಿಗುತ್ತದೆ ಮತ್ತು ಇದರಲ್ಲಿ ನಮ್ಮ ದೇಹಕ್ಕೆ ಅವಶ್ಯಕವಾದ ವಿಟಮಿನ್ಸ್,ಮಿನರಲ್ಸ್ ಮತ್ತು ಹಲವು ಪೋಷಕಾಂಶಗಳಿಂದ ಕೂಡಿದೆ. ಸಂಶೋಧನೆಯ ಪ್ರಕಾರ ಎಳನೀರನ್ನು ಪ್ರತಿದಿನ ಕುಡಿಯುವುದರಿಂದ ಕ್ಯಾನ್ಸರ್ ಖಾಯಿಲೆಯಿಂದ ದೂರವಿರಬಹುದು.
5.ಹಸಿರು ಸೊಪ್ಪು ತರಕಾರಿಗಳು
ಹಸಿರು ಸೊಪ್ಪು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿದೆ. ನೆನಪಿಡಿ, ಈ ತರಕಾರಿಗಳನ್ನು ಅತಿಯಾಗಿ ಬೇಯಿಸಬಾರದು ಏಕೆಂದರೆ ಅವುಗಳಲ್ಲಿ ನೀರಿನ ಅಂಶ ಹೊರಟು ಹೋಗುತ್ತದೆ.
6.ಕರ್ಬೂಜ
ಕರ್ಬೂಜ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವಿರುವುದರಿಂದ ದೇಹವನ್ನು ಹೈಡ್ರೇಟ್ ಮಾಡುವುದಲ್ಲದೆ ರಿಫ್ರೆಶ್ ಎಫೆಕ್ಟ್ಅನ್ನು ಕೊಡುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಕರ್ಬೂಜ ಹಣ್ಣು ತಿನ್ನುವುದು ಒಳ್ಳೆಯದು.
7.ನಿಂಬೆ ರಸ
ಇದು ಕೂಡ ಬೇಸಿಗೆಯಲ್ಲಿ ಕುಡಿಯುವುದರಿಂದ ದೇಹವನ್ನು ತಂಪಾಗಿಸಿ ರಿಫ್ರೆಶಿಂಗ್ ಎಫೆಕ್ಟ್ಅನ್ನು ಕೊಡುತ್ತದೆ.
8.ಕಬ್ಬಿನ ರಸ
ಕಬ್ಬಿನ ರಸ ಬೇಸಿಗೆಯಲ್ಲಿ ಅತ್ಯಗತ್ಯ. ಇದು ವಿಟಮಿನ್ಸ್ ಇಂದ ಕೂಡಿರುತ್ತದೆ ಮತ್ತು ದೇಹದ ಶಾಖವನ್ನು ಕಡಿಮೆ ಮಾಡುತ್ತದೆ.
ನೀವು ಫುಡ್ ಡಯಟ್ ಅಥವಾ ಬೇರೆ ಯಾವುದೇ ಮೆಡಿಕಲ್ ಕನ್ಸಲ್ಟೇಶನ್ ಮತ್ತು ಸರ್ಜರಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, www.surgeryxchange.com ಗೆ ಲಾಗಿನ್ ಆಗಿ.

No comments:
Post a Comment